ಸೇಲ್ಸ್ ಗರ್ಲ್ ನಿಂದ ರಕ್ಷಣಾ ಸಚಿವೆ: ಇದು ಬಿಜೆಪಿ ಪಕ್ಷದ ಯಶಸ್ವಿ ನಾಯಕಿಯ ಯಶೋಗಾಥೆ

ಸೇಲ್ಸ್ ಗರ್ಲ್ ನಿಂದ ರಕ್ಷಣಾ ಸಚಿವೆ: ಇದು ಬಿಜೆಪಿ ಪಕ್ಷದ ಯಶಸ್ವಿ ನಾಯಕಿಯ ಯಶೋಗಾಥೆ

ಕೆಲವೇ ಕೆಲವು ದಿನಗಳ ಹಿಂದಷ್ಟೇ ಇಡೀ ಭಾರತ ದೇಶವೇ ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುವಂತಹ ಘಟನೆಯೊಂದು ನಡೆದಿತ್ತು. ನರೇಂದ್ರ ಮೋದಿ ಅವರನ್ನು ಮಹಿಳಾ ವಿರೋಧಿ ಎಂದು ಬಿಂಬಿಸುತ್ತಿದ್ದ ವಿರೋಧ ಪಕ್ಷಗಳಿಗೆ ಇಡೀ ಸಂಸತ್ತಿನಲ್ಲಿ ಒಬ್ಬರು ಮಹಿಳೆ ರಾಫಲ್  ವಿವಾದದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿದ್ದ ಸುಳ್ಳಿನ ಆರೋಪಗಳಿಗೆ ತಕ್ಕ ಉತ್ತರ ನೀಡಿದ್ದರು.

ರಫೇಲ್ ಒಪ್ಪಂದದ ಕುರಿತಾದ ವಿರೋಧ ಪಕ್ಷಗಳ ಸುಳ್ಳು ಆರೋಪಗಳಿಗೆ ಸಂಸತ್ತಿನಲ್ಲಿ ಮೋದಿ ರವರ ಪರವಾಗಿ ಧ್ವನಿ ಎತ್ತಿದ್ದ ಭಾರತದ ಹೆಮ್ಮೆಯ ರಕ್ಷಣಾ ಸಚಿವರಾಗಿರುವ ನಿರ್ಮಲಾ ಸೀತಾ ರಾಮನ್ ರವರ ಪ್ರತಿಯೊಂದು ದಾಖಲೆ ಹಾಗೂ ಮಾತುಗಳನ್ನು ಕೇಳಿದ ವಿರೋಧ ಪಕ್ಷದ ನಾಯಕರು ಸುಮ್ಮನೆ ಕೂತು ಕೊಳ್ಳ ಬೇಕಾದ ಪರಿಸ್ಥಿತಿ ಎದುರಾಗಿತ್ತು.

ಮನೋಹರ್ ಪರ್ರಿಕರ್ ಅವರ ಸ್ಥಾನದಿಂದ ತೆರವಾಗಿದ್ದ ರಕ್ಷಣಾ ಸಚಿವ ಸ್ಥಾನವನ್ನು ಮೋದಿ ರವರು ನಿರ್ಮಲಾ ಸೀತಾರಾಮನ್ ರವರಿಗೆ ವಹಿಸಿದ್ದ ಕ್ಷಣವೂ ಸಹ ದೇಶದಲ್ಲಿ ಎಷ್ಟೋ ನಾಯಕರು ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುವಂತಹ ಪರಿಸ್ಥಿತಿ ಎದುರಾಗಿತ್ತು ಯಾಕೆಂದರೆ ಒಬ್ಬ ಮಹಿಳೆ ಭಾರತದ ರಕ್ಷಣಾ ಸಚಿವೆ ಎಂಬ ಪಟ್ಟವನ್ನು ನಿಭಾಯಿಸುವುದು ಸಾಧ್ಯವೇ ಎಂದು ವಿರೋಧ ಪಕ್ಷಗಳು ನಗುತ್ತಿದ್ದವು ಆದರೆ ನರೇಂದ್ರ ಮೋದಿ ರವರ ಭರವಸೆಯನ್ನು ನಿರ್ಮಲಾ ಸೀತಾರಾಮನ್ ರವರು ಹುಸಿ ಮಾಡಲಿಲ್ಲ.

ಮೊದಲಿನಿಂದಲೂ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗುತ್ತಿರುವ ಇವರು ಕಾಲಕ್ಕೆ ತಕ್ಕಂತೆ ತೀಕ್ಷ್ಣವಾಗಿ ಉತ್ತರ ನೀಡುತ್ತಾ, ಭಾರತದಂತಹ ದೊಡ್ಡ ರಾಷ್ಟ್ರದ ರಕ್ಷಣಾ ಸಚಿವ ಸ್ಥಾನವನ್ನು ಬಹಳ ಯಶಸ್ಸಿನಿಂದ ನಿಭಾಯಿಸುತ್ತಾ ಬಂದಿದ್ದಾರೆ. ಈ ಗಟ್ಟಿತನ ಹಾಗೂ ಈ ಹುಮ್ಮಸ್ಸು ಇವರಲ್ಲಿ ಹೇಗೆ ಬಂದಿದೆ ಎಂಬುದು ಎಲ್ಲರಿಗೂ ಆಶ್ಚರ್ಯಕರವಾದ ಸಂಗತಿ ಯಾಗಿದೆ ಅವರು ರಾಜಕೀಯದಲ್ಲಿ ಇಷ್ಟರ ಮಟ್ಟಿಗೆ ಬೆಳೆಯಲು ಕಾರಣವೇನು ಹಾಗೂ ಅವರ ಹಿನ್ನೆಲೆ ಏನು ಎಂಬ ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ.

ಇವರ ಬದುಕು ಹಾಗೂ ಮಾಡುತ್ತಿದ್ದ ಕೆಲಸ ವಾದರೂ ಏನು ಗೊತ್ತಾ??

ನಿರ್ಮಲ ಸೀತಾರಾಮನ್ ರವರು ತಮಿಳುನಾಡಿನ ಮದುರೈಯಲ್ಲಿ ಜನಿಸಿದರು ತಮ್ಮ ಬದುಕಿನ ಬಾಲ್ಯದ ದಿನಗಳನ್ನು ಚೆನ್ನೈನಲ್ಲಿ ಕಳೆದ ಇವರ ತಂದೆ ಭಾರತೀಯ ರೈಲ್ವೆ ಇಲಾಖೆಯಲ್ಲಿ ನೌಕರರಾಗಿದ್ದರು. ತಂದೆಗೆ ಪದೇ ಪದೇ ವರ್ಗಾವಣೆ ವಾಗುತ್ತಿದ್ದ ಕಾರಣ ಇವರು ತಮ್ಮ ಸಂಬಂಧಿಕರ ಮನೆಯಲ್ಲಿ ಓದುತ್ತಾ ಬಿಎ ಪದವಿಯನ್ನು ಪಡೆದುಕೊಂಡರು. ಮುಂದಿನ ತಮ್ಮ ಶಿಕ್ಷಣಕ್ಕಾಗಿ ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಷಯಗಳಲ್ಲಿ ಎಂ ಎ ಪದವಿ ಮಾಡಿದ ಬಳಿಕ ರಾಜಕೀಯವಾಗಿ ಆಸಕ್ತಿ ಬೆಳೆಯತೊಡಗಿತು.

ಕಾಂಗ್ರೆಸ್ ಪಕ್ಷದ ಸಚಿವರಾಗಿದ್ದ ಪರ್ಕಳ ಶೇಷಾವತಾರ ಅವರ ಮಗ ಡಾಕ್ಟರ್ ಪ್ರಭಾಕರ್ ಪರ್ಕಳ ರವರು ನಿರ್ಮಲಾ ಸೀತಾರಾಮನ್ ರವರನ್ನು ರಾಜಕೀಯಕ್ಕೆ ಕರೆತಂದರು. ರಾಜಕೀಯಕ್ಕೆ ಕರೆತರುವ ಮಾತು ಕೇಳಿದ ತಕ್ಷಣವೇ ನಿರ್ಮಲಾ ಸೀತಾರಾಮನ್ ರವರಿಗೆ ಬಿಜೆಪಿ ಪಕ್ಷ ಸೇರಿ ಕೊಳ್ಳಬೇಕು ಎಂಬ ಆಸೆ ಮೂಡಿತ್ತು ಆದರೆ ಡಾಕ್ಟರ್ ಪ್ರಭಾಕರ್ ಕರ್ಕಲ ರವರು ಕಾಂಗ್ರೆಸ್ ಸೇರುವಂತೆ ಒತ್ತಾಯ ಮಾಡಿದರು. ತದನಂತರ 1986 ರಲ್ಲಿ ಇಬ್ಬರು ಮದುವೆಯಾದರು.

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಪಿಎಚ್ಡಿ ಪದವಿಯನ್ನು ಪಡೆಯಲು ಪ್ರಭಾಕರ್ ರವರು ಲಂಡನ್ ಗೆ ತೆರಳುತ್ತಾರೆ. ಬೇರೆ ದಾರಿಯಿಲ್ಲದೆ ನಿರ್ಮಲಾ ಸೀತಾರಾಮನ್ ರವರು ತಮ್ಮ ಪತಿಯ ಜೊತೆಗೂಡಿ ಲಂಡನ್ ನಲ್ಲಿ ವಾಸಿಸಲು ಆರಂಭಿಸುತ್ತಾರೆ, ಇದೇ ಸಮಯದಲ್ಲಿ ಲಂಡನ್ ನಲ್ಲಿರುವ ಗೃಹಾಲಂಕಾರ ಅಂಗಡಿಯೊಂದರಲ್ಲಿ ನಿರ್ಮಲಾ ಸೀತಾರಾಮನ್ ರವರು ಸೇಲ್ಸ್ ಗರ್ಲ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ನಿರ್ಮಲಾ ಸೀತಾರಾಮನ್ ರವರ ಕೆಲಸ ಕಂಡು, ಚಾಕಚಕ್ಯತೆಗೆ ಅಗ್ರಿಕಲ್ಚರ್ ಇಂಜಿನಿಯರ್ಸ್ ಅಸೋಸಿಯೆಶನ್ ನಲ್ಲಿ ಅರ್ಥಶಾಸ್ತ್ರಜ್ಞರಾಗಿ ಕೆಲಸ ನಿರ್ವಹಿಸುತ್ತಿದ್ದ ಅಧಿಕಾರಿಯು ತಮ್ಮ ಸಹಾಯಕರಾಗಿ ನಿರ್ಮಲಾ ಸೀತಾರಾಮನ್ ರವರನ್ನು ನೇಮಿಸಿಕೊಳ್ಳುತ್ತಾರೆ ಬಳಿಕ ಪ್ರೈಸ್ ವಾಟರ್ ಹೌಸ್ ನಲ್ಲಿ ಹಿರಿಯ ಮ್ಯಾನೇಜರ್ ಆಗಿ ಹಾಗೂ ಬಿಬಿಸಿ ವರ್ಲ್ಡ್ ಸರ್ವಿಸ್ ನಲ್ಲಿ ಕೆಲವು ದಿನಗಳ ಕಾಲ ಕೆಲಸ ಮಾಡುತ್ತಾರೆ.

ಇವೆಲ್ಲವೂ ನನಗೆ ಸೂಕ್ತವಲ್ಲ ಎಂಬುದನ್ನು ಅರಿತ ನಿರ್ಮಲಾ ಸೀತಾರಾಮನ್ ರವರು 1991 ರಲ್ಲಿ ಪತಿಯ ಜೊತೆಗೂಡಿ ಭಾರತಕ್ಕೆ ವಾಪಸ್ಸಾಗುತ್ತಾರೆ. ಹೈದರಾಬಾದಿನಲ್ಲಿ ತಮ್ಮದೇ ಆದ ಶಾಲೆಯೊಂದನ್ನು ತೆರೆದು ಕೆಲಸ ನಿರ್ವಹಿಸುತ್ತಿ ದ್ದಾಗ ಸುಷ್ಮಸ್ವರಾಜ್ ರವರು ಈ ಶಾಲೆಗೆ ಒಮ್ಮೆ ಭೇಟಿ ನೀಡುತ್ತಾರೆ ತದನಂತರ ನಿರ್ಮಲಾ ಸೀತಾರಾಮನ್ ರವರ ರಾಜಕೀಯ ಜೀವನ ಆರಂಭವಾಗುತ್ತದೆ.

ನಿರ್ಮಲಾ ಸೀತಾರಾಮನ್ ರವರ ಜೊತೆ ಒಂದು ಭೇಟಿಯಲ್ಲಿಯೇ ಅವರ ಸಾಮರ್ಥ್ಯವನ್ನು ಅರ್ಥಮಾಡಿಕೊಂಡ ಸುಷ್ಮಸ್ವರಾಜ್ ರವರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ನಿರ್ಮಲಾ ಸೀತಾರಾಮನ್ ರವರನ್ನು ನೇಮಕ ಮಾಡುತ್ತಾರೆ. ಅದೇ ಸಮಯದಲ್ಲಿ ಪ್ರಭಾಕರ್ ರವರು ಸಹ ರಾಜಕೀಯ ಜೀವನ ಮುಂದುವರಿಸಲು ನಿರ್ಧರಿಸುತ್ತಾರೆ ಆದ ಕಾರಣ ಇಂದಿನ ಮುಖ್ಯಮಂತ್ರಿ ಗಳಾಗಿರುವ ಚಂದ್ರಬಾಬು ನಾಯ್ಡು ರವರಿಗೆ ಸಹಾಯಕರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ಮಹಿಳಾ ಆಯೋಗ ದಲ್ಲಿ ಮೂರು ವರ್ಷಗಳ ಅನುಭವದ ಬಳಿಕ 2006ರಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ‌. ಪಕ್ಷದೊಳಗೆ ಮಹಿಳೆಯರಿಗಾಗಿ ಶೇಕಡಾ 33ರಷ್ಟು ಮೀಸಲಾತಿ ಯನ್ನು ಅಳವಡಿಸಿದಾಗ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಸೇರಿಕೊಳ್ಳಲು ಬಿಜೆಪಿ ಪಕ್ಷವು ಇವರಿಗೆ ಆಹ್ವಾನವನ್ನು ನೀಡುತ್ತದೆ. 2010 ರಲ್ಲಿ ಮೊಟ್ಟಮೊದಲ ಬಾರಿಗೆ ರಾಷ್ಟ್ರೀಯ ವಕ್ತಾರರಾಗಿ ಆಯ್ಕೆಯಾದ ಇವರು ಹೈದರಾಬಾದಿನಿಂದ ದಿಲ್ಲಿಗೆ ತೆರಳುತ್ತಾರೆ.

ಇನ್ನು ಆಂಧ್ರಪ್ರದೇಶದಿಂದ ರಾಜ್ಯಸಭೆ ಸದಸ್ಯೆಯಾಗಿ 2016ರಲ್ಲಿ ನರೇಂದ್ರ ಮೋದಿ ರವರ ಸಂಪುಟವನ್ನು ಸೇರಿಕೊಳ್ಳುತ್ತಾರೆ.ಮೊದಲು ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಖಾತೆ ಸಚಿವೆಯಾಗಿ ವಾಣಿಜ್ಯ ಹಾಗೂ ಕೈಗಾರಿಕಾ ಸ್ವತಂತ್ರ ಸಚಿವರು ಅನುಭವವನ್ನು ಪಡೆದುಕೊಂಡು ಇವರು 2016ರಲ್ಲಿ ರಾಜ್ಯ ಸಭೆಗೆ ಕರ್ನಾಟಕದಿಂದ ಸ್ಪರ್ಧಿಸಿ ಆಯ್ಕೆಯಾಗುತ್ತಾರೆ.

ಇನ್ನು ನಡೆದದ್ದೆಲ್ಲವೂ ಇತಿಹಾಸ 2017ರಲ್ಲಿ ರಕ್ಷಣಾ ಸಚಿವೆಯಾಗಿ ನರೇಂದ್ರ ಮೋದಿ ಅವರು ಇವರಿಗೆ ಬಡ್ತಿ ನೀಡುತ್ತಾರೆ. ಪ್ರಧಾನಿಯಾಗಿದ್ದ ಇಂದಿರಾ ಗಾಂಧಿರವರ ಬಳಿಕ ರಕ್ಷಣಾ ಸಚಿವಾಲಯದ ಜವಾಬ್ದಾರಿ ವಹಿಸಿಕೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗುವ ಇವರು, ಇದುವರೆಗೂ ಭಾರತದ ಯಾವುದೇ ರಕ್ಷಣಾ ವಿಷಯದಲ್ಲಿಯೂ ಸಹ ರಾಜಿಯನ್ನು ಮಾಡಿಕೊಳ್ಳದೆ ಹೆಮ್ಮೆಯಿಂದ ಪ್ರತಿಯೊಬ್ಬ ಸೈನಿಕರು ಹಾಗೂ ದೇಶದ ಜನರು ಮೆಚ್ಚಿ ಕೊಳ್ಳುವಂತೆ ದೇಶವನ್ನು ಮುನ್ನಡೆಸುತ್ತಾ ಸಾಗಿದ್ದಾರೆ.

ಇವರ ಕಾರ್ಯವೈಖರಿ ಯನ್ನು ನೋಡಿ ಅದೆಷ್ಟೋ ಯುವಕರು ಸ್ಫೂರ್ತಿಗೊಂಡಿದ್ದಾರೆ. ಇನ್ನು ಇವರ ಜೀವನದ ಗಾಥೆಯನ್ನು ಕೇಳಿದ ನೀವು ಸಹ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಚಲವನ್ನು ಮನದಲ್ಲಿ ಇಟ್ಟುಕೊಂಡು ಹೋರಾಡಿ ಖಂಡಿತ ನಿಮ್ಮ ಹೋರಾಟಕ್ಕೆ ಜಯ ದೊರೆತೇ ದೊರೆಯುತ್ತದೆ. ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿ.