ಹನುಮಂತು ರವರ ತಂಗಿಗೆ ನೆರವಾದ ಸರಿಗಮಪ ವೇದಿಕೆ

  • 1.6K
    Shares

ಸರಿಗಮಪ ಸೀಸನ್ 15 ರಲ್ಲಿ ಇಡೀ ಕರ್ನಾಟಕದ ಮನಗೆದ್ದಿರುವ ಹನುಮಂತಪ್ಪ ನವರಿಗೆ ಮತ್ತೊಂದು ಶುಭ ಸುದ್ದಿ ಸಿಕ್ಕಿದೆ. ಇತ್ತೀಚಿಗೆ ತಮ್ಮ ಹಾಡುಗಳ ಮೂಲಕ ಭಾರಿ ಸದ್ದು ಮಾಡಿರುವ ಹನುಮಂತಪ್ಪ ನವರಿಗೆ ಕಳೆದ ಕೇವಲ ಎರಡು ವಾರಗಳಿಂದ ಸಾಲು ಸಾಲು ಸಿಹಿ ಸುದ್ದಿ ಗಳು ಸಿಗುತ್ತವೆ. ಬಡ ಕುಟುಂಬದಿಂದ ಬಂದು ಜೀ ವಾಹಿನಿಯಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿರುವ ಹನುಮಂತಪ್ಪ ನವರಿಗೆ ನಮ್ಮದೊಂದು ಸಲಾಂ.

ಈಗ ಹನುಮಂತಪ್ಪ ನವರಿಗೆ ಮತ್ತೊಂದು ಸಿಹಿ ಸುದ್ದಿ ದೊರಕಿದ್ದು ಇಡೀ ಕುಟುಂಬವೆ ಜೀ ವಾಹಿನಿ ಗೆ ಧನ್ಯವಾದಗಳನ್ನು ತಿಳಿಸಿದೆ. ಹಾಗೂ ಈ ಮೂಲಕ ಹನುಮಂತಪ್ಪನವರ ಕುಟುಂಬಕ್ಕೆ ಮತ್ತಷ್ಟು ಸಹಕಾರ ಒದಗಿ ಬಂದಿದ್ದು ಹನುಮಂತಪ್ಪನವರು ಇನ್ನಿಲ್ಲದ ಸಂತೋಷದಲ್ಲಿ ಮಾಡುತ್ತಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು ಗೊತ್ತಾ??

ಪ್ರತಿವಾರ ವಿಭಿನ್ನ ರೌಂಡ್ ಗಳು ಇದ್ದಂತೆ ಈ ಬಾರಿ ಫ್ಯಾಮಿಲಿ ರೌಂಡ್ ನಲ್ಲಿ ಹನುಮಂತಪ್ಪನವರು ತಮ್ಮ ಸಹೋದರಿ ಅವರನ್ನು ಕರೆದುಕೊಂಡು ಬಂದು ಸರಿಗಮಪ ವೇದಿಕೆಯಲ್ಲಿ ಹಾಡಿನ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಉತ್ತರ ಕರ್ನಾಟಕದ ಜನಪ್ರಿಯ ಬಡತನದ ಮನೆಯೊಳಗೆ ಹೆಣ್ಣು ಹುಟ್ಟಬಾರದು ಎಂಬ ಹಾಡನ್ನು ಹಾಡಿ ನೆರೆದಿದ್ದವರನ್ನು ಒಂದು ಕ್ಷಣ ಬಾವು ಕರಗುವಂತೆ ಅಣ್ಣ ತಂಗಿ ಮಾಡುತ್ತಾರೆ.

ಇದೇ ಸಮಯದಲ್ಲಿ ಹನುಮಂತಪ್ಪನವರ ಸಹೋದರಿಯನ್ನು ಬೆಂಗಳೂರಿನಿಂದ ನಿನ್ನ ಸಹೋದರ ಮನೆಗೆ ಬಂದಾಗ ನಿನಗೆ ಏನು ತಂದು ಕೊಟ್ಟ ಎಂದು ಕೇಳಿದ್ದಕ್ಕೆ ಆಕೆ ನೂರು ರೂಪಾಯಿ ಕೊಟ್ಟು ಹೋದ ಎಂದು ಹೇಳುತ್ತಾಳೆ ಆ ಹಣದಲ್ಲಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದಾಗ ನೋಟ್ಸ್ ತೆಗೆದುಕೊಂಡೆ ಎಂದು ಮುಕ್ತವಾಗಿ ಉತ್ತರ ನೀಡುತ್ತಾರೆ ಇದು ನೆರೆದಿದ್ದ ಎಲ್ಲರನ್ನೂ ಒಂದು ಕ್ಷಣ ಭಾವುಕರನ್ನಾಗಿ ಮಾಡುತ್ತದೆ.

ಇದನ್ನು ಗಮನಿಸಿದ ಕಾನ್ಫಿಡೆನ್ಸ್ ಗ್ರೂಪ್ ನ ಮಾಲೀಕರು ಇವರ ಕಷ್ಟವನ್ನು ಕಂಡು ಹಾಕಿಯ ವಿದ್ಯಾಭ್ಯಾಸಕ್ಕೆ ಐವತ್ತು ಸಾವಿರ ರೂಪಾಯಿ ತಮ್ಮ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಘೋಷಿಸುತ್ತಾರೆ. ಈ ಕಂಪನಿಯ ಮಾಲೀಕರ ಈ ನಿರ್ಧಾರಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಇದರಿಂದ ಹನುಮಂತಪ್ಪನವರ ಕುಟುಂಬಕ್ಕೆ ಮತ್ತೊಂದು ಆಧಾರ ದೊರೆತಂತಾಗಿದ್ದು ಹನುಮಂತಪ್ಪನವರು ಇನ್ನಿಲ್ಲದ ಸಂತೋಷದಲ್ಲಿ ತೇಲಾಡುತ್ತಿದ್ದಾರೆ.

Facebook Comments

Post Author: RAVI