ನಡೆದಾಡುವ ದೇವರಿಗೆ ನಮಿಸಿ ದ ನಾಗರಹಾವು: ಇದಲ್ಲವೇ ದೈವ ಮಹಿಮೆ

ನಡೆದಾಡುವ ದೇವರಿಗೆ ನಮಿಸಿ ದ ನಾಗರಹಾವು: ಇದಲ್ಲವೇ ದೈವ ಮಹಿಮೆ

ನಡೆದಾಡುವ ದೇವರು ಇಂದು ನಮ್ಮ ಜೊತೆ ಇಲ್ಲ ಆದರೆ ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವು ನಡೆದರೆ ಅದೆಷ್ಟು ಪುಣ್ಯ ಬರುತ್ತದೆ. ಮೊದಲಿನಿಂದಲೂ ಹಲವಾರು ಬಡವರಿಗೆ ದಾರಿದೀಪವಾಗಿದೆ ನಡೆದಾಡುವ ದೇವರು ನಮ್ಮೆಲ್ಲರನ್ನು ಅನಾಥ ಮಾಡಿ ತಮ್ಮ ವಾಸಸ್ಥಾನಕ್ಕೆ ಹಿಂತಿರುಗಿದ್ದಾರೆ.

ಸಿದ್ದಗಂಗಾ ಶ್ರೀಗಳು ನಮ್ಮೆಲ್ಲರ ಜೊತೆಗೆ ಇದ್ದ ಸಮಯದಲ್ಲಿ ಹಲವಾರು ಪವಾಡಗಳನ್ನು ಸೃಷ್ಟಿಸಿದ್ದಾರೆ. ಒಮ್ಮೆ ಸಿದ್ದಗಂಗಾ ಮಠದಲ್ಲಿ ಕುದಿಯುತ್ತಿದ್ದ ಸಾಂಬಾರಿಗೆ ವಿಷಸರ್ಪ ಬಿದ್ದಿತ್ತು ಅಂದು ಪವಾಡವೆಂಬಂತೆ ಮಕ್ಕಳಿಗೆ ಬಡಿಸುವಂತೆ ಸಿದ್ದಗಂಗಾ ಶ್ರೀಗಳು ಆದೇಶಿಸಿದ್ದರು, ಇದೇ ರೀತಿ ನಾವು ಹೇಳುತ್ತಾ ಹೋದರೆ ಹಲವಾರು ಪವಾಡಗಳನ್ನು ಅವರು ಸೃಷ್ಟಿಸಿದ್ದಾರೆ.

ಆದರೆ ಅವರ ತದನಂತರ ಪವಾಡಗಳು ನಿಂತಿಲ್ಲ, ಅವು ಇನ್ನೂ ಮುಂದುವರೆದಿದೆ ಎಂದರೆ ನೀವು ನಂಬಲೇಬೇಕು. ಚನ್ನಗಿರಿ ತಾಲೂಕಿನ ನಾಗೇನಹಳ್ಳಿಯಲ್ಲಿ ನಡೆದ ಘಟನೆಯನ್ನು ನೀವು ನೋಡಿದರೆ ಒಂದು ಕ್ಷಣ ಶಾಕ್ ಆಗುತ್ತೀರಾ. ಅಷ್ಟಕ್ಕೂ ನಡೆದಿದ್ದೇನು ಗೊತ್ತಾ?

ಎಲ್ಲಾ ಊರಿನಂತೆ ನಾಗೇನಹಳ್ಳಿ ಗ್ರಾಮಸ್ಥರು ಸಹ ನಡೆದಾಡುವ ದೇವರನ್ನು ಕಳೆದುಕೊಂಡ ದುಃಖದಲ್ಲಿ ಮುಳುಗಿದರು, ಶ್ರದ್ಧಾಂಜಲಿ ಸಲ್ಲಿಸುವ ಉದ್ದೇಶದಿಂದ ಗ್ರಾಮದ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಶ್ರೀಗಳ ಭಾವಚಿತ್ರವನ್ನು ಇಟ್ಟು ಪ್ರಾರ್ಥನೆ ಮಾಡಿದರು.

ಗ್ರಾಮಸ್ಥರು ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಅಚ್ಚರಿ ಎಂಬಂತೆ ನಾಗರಹಾವು ಅಲ್ಲಿಗೆ ಆಗಮಿಸಿದೆ. ಇದನ್ನು ಕಂಡ ಕೆಲವು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಆದರೆ ಹಾವು ಯಾರಿಗೂ ತೊಂದರೆ ಯನ್ನು ನೀಡದೆ ಸಿದ್ದಗಂಗಾ ಶ್ರೀಗಳ ಭಾವಚಿತ್ರದ ಮುಂದೆ ಒಂದು ಗಂಟೆಗೂ ಅಧಿಕ ಕಾಲ ಕುಳಿತಿದೆ. ಕೇವಲ ಮನುಷ್ಯರು ಮಾತ್ರವಲ್ಲದೆ ಮೂಕ ಜೀವಿಗಳು ಸಹ ಸಿದ್ದಗಂಗಾ ಶ್ರೀಗಳಿಗೆ ನಮನವನ್ನು ಸಲ್ಲಿಸುವೆ.