ತನ್ನ ಎರಡು ಕೈಗಳನ್ನು ಕಳೆದುಕೊಂಡರು ಈಕೆ ಮಾಡಿರುವ ಸಾಧನೆ ಗಳನ್ನು ನೋಡಿದರೆ ಭೇಷ್ ಎನ್ನುತ್ತೀರಾ !!

ತನ್ನ ಎರಡು ಕೈಗಳನ್ನು ಕಳೆದುಕೊಂಡರು ಈಕೆ ಮಾಡಿರುವ ಸಾಧನೆ ಗಳನ್ನು ನೋಡಿದರೆ ಭೇಷ್ ಎನ್ನುತ್ತೀರಾ !!

ಡಾಕ್ಟರ್ ಮಾಳವಿಕಾ ಅಯ್ಯರ್, ಈ ಹೆಸರು ಕೇಳಿದರೆ ಸಾಕು ವಿಶ್ವದಲ್ಲಿ ಅದೆಷ್ಟೋ ಜನರಿಗೆ ಹೊಸದೊಂದು ಹುಮ್ಮಸ್ಸು ಕಾಣಸಿಗುತ್ತದೆ. ಈಕೆ ತನ್ನ ಎರಡು ಕೈಗಳನ್ನು ಕಳೆದುಕೊಂಡರು ಮಾಡುತ್ತಿರುವ ಸಮಾಜಸೇವೆ ಹಾಗೂ ಸಾಧನೆಗಳನ್ನು ನೀವು ಕೇಳಿದರೆ ಖಂಡಿತ ಮುಂದಿನ ಬಾರಿ ನೀವು ಇವರ ಹೆಸರು ಕೇಳಿದಾಗ ನಿಮಗೂ ಸಹ ಹೊಸ ಹುಮ್ಮಸ್ಸು ಕಾಣಸಿಗುತ್ತದೆ. ನಿಮಗೆ ಇವರ ಬಗ್ಗೆ ತಿಳಿದಿಲ್ಲ ಎಂದರೆ ಈ ಸಂಪೂರ್ಣ ಲೇಖನವನ್ನು ಓದಿ.

2002ರಲ್ಲಿ 13 ವರ್ಷದ ಪುಟ್ಟ ಬಾಲಕಿಯ ಒಬ್ಬರು ತನ್ನ ಜೀನ್ಸ್ ಪ್ಯಾಂಟಿನ ಹರಿದುಹೋಗಿರುವ ಭಾಗಕ್ಕೆ ಹೊಲಿಗೆ ಹಾಕಲು ಟೈಲರಿಂಗ್ ಸಾಧನಗಳನ್ನು ಹುಡುಕುತ್ತಿರುತ್ತಾರೆ. ಹಾಗೆ ಹುಡುಕುವಾಗ ತಮ್ಮ ಮನೆಯ ಗ್ಯಾರೇಜಿನಲ್ಲಿ ಒಂದು ಆಟಿಕೆ ರೀತಿ ಇರುವ ವಸ್ತು ಅವರ ಕೈಗೆ ಸಿಗುತ್ತದೆ. ಎಂದಿಗೂ ನೋಡಿರದ ಆಟಿಕೆಯನ್ನು ಖುಷಿ ಖುಷಿಯಿಂದ ತನ್ನ ಅಮ್ಮನ ಬಳಿಗೆ ತೆಗೆದುಕೊಂಡು ಓಡಿ ಹೋಗುತ್ತಾಳೆ.

ಅವರ ಕುಟುಂಬದಲ್ಲಿ ಯಾರಿಗೂ ಇದರ ಬಗ್ಗೆ ಅರಿವು ಇರುವುದಿಲ್ಲ ಯಾಕೆಂದರೆ, ಕೆಲವೇ ಕೆಲವು ತಿಂಗಳುಗಳ ಹಿಂದೆ ಅವರು ತಂಗಿದ್ದ ಸ್ಥಳದಲ್ಲಿ ದುರದೃಷ್ಟವಶಾತ್ ಬಾಂಬ್ ಗಳು ಸ್ಫೋಟಗೊಂಡಿದ್ದವು. ಸ್ಪೋಟಗೊಂಡ ಸಮಯದಲ್ಲಿ ಹಲವಾರು ಇನ್ನೂ ಸಿಡಿಯದ ಸಿಡಿಮದ್ದುಗಳು ಅದೇ ಪ್ರದೇಶದಲ್ಲಿ ಉಳಿದುಕೊಂಡಿದ್ದವು. ದುರದೃಷ್ಟವಶಾತ್ ಇಂದು ಆ ಪುಟ್ಟ ಬಾಲಕಿಯ ಕೈಗೆ ಗ್ರೈನೆಡ್ ಸಿಕ್ಕಿತ್ತು. ಅದರ ಬಗ್ಗೆ ಏನು ಅರಿವಿಲ್ಲದೆ ಎತ್ತುಕೊಂಡು ಓಡುವಾಗ ಆ ಬಾಂಬ್ ಸ್ಫೋಟಗೊಂಡಿತ್ತು.

ಕೆಲವೇ ಕೆಲವು ನಿಮಿಷಗಳಲ್ಲಿ ಈ ಎಲ್ಲ ಘಟನೆಗಳು ನಡೆದುಹೋಗಿದ್ದವು. ಬಾಲಕಿಯು ಎರಡೂ ಕೈಗಳನ್ನು ಕಳೆದುಕೊಂಡಿದ್ದಳು. ಇನ್ನೇನು ಬದುಕುವುದಿಲ್ಲ ಎನ್ನುವ ಮಟ್ಟಿಗೆ ಬಾಲಕಿಯ ಸ್ಥಿತಿ ಹದಗೆಟ್ಟಿತು ಆದರೆ ದೇವರು ಮಗುವಿನ ಪ್ರಾಣವನ್ನು ಉಳಿಸಿದ್ದನು‌. 18 ತಿಂಗಳುಗಳ ಕಾಲ ಹಲವಾರು ಸರ್ಜರಿ ಗಳನ್ನು ಮಾಡಿ ಮಗುವಿನ ಪ್ರಾಣ ಉಳಿಸಲಾಯಿತು.

ಆದರೆ 18 ತಿಂಗಳ ನಂತರ ಮಗು ನಡೆದಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆ ಮಗುವಿಗೆ ಆತ್ಮಸ್ಥೈರ್ಯ ಬಿಟ್ಟರೆ ಬೇರೆ ಏನೂ ಇರಲಿಲ್ಲ. ಜೀವನವನ್ನು ಸಾಗಿಸಲು ಆತ್ಮಸ್ಥೈರ್ಯವನ್ನು ನಂಬಿಕೊಂಡು ಮೊದಲು ನಡೆದಾಡುವುದನ್ನು ಕಲಿಯಲು ಪ್ರಾರಂಭಿಸಿದರು ಮಾಳವಿಕಾ. ತದನಂತರ ಮೆಟ್ಟಿಲು ಹತ್ತುವುದನ್ನು ತನ್ನ ಕಳೆದುಕೊಂಡ ಕೈಗಳಿಂದ ಟಿವಿ ರಿಮೋಟ್ ಬಳಸುವುದನ್ನು ಅಭ್ಯಾಸ ಮಾಡುತ್ತಿದ್ದ ವೇಳೆ ಎಲ್ಲಿ ಹಲವಾರು ಜನರು ಇವರನ್ನು ಟೀಕಿಸುತ್ತಿದ್ದರು.

ಆದರೆ ಇದ್ಯಾವುದಕ್ಕೂ ಧೃತಿಗೆಡದ ಮಾಳವಿಕಾ ಅವರು ತಮ್ಮ ಗುರಿಯತ್ತ, ಮುಖ ಮಾಡಿ ಸರಿ ಸಾಟಿಯೇ ಇಲ್ಲದಂತೆ ಮುಂದುವರೆದರು. ಇವರ ಸಂಪೂರ್ಣ ಜೀವನ ಸ್ಟೋರಿಯನ್ನು ತಿಳಿಯಲು ಅವರ ಮಾತುಗಳನ್ನು ನೀವೇ ಕೇಳಿ.

ಚಿಕ್ಕಂದಿನಿಂದಲೂ ಬಹಳ ಮುದ್ದು ಮುದ್ದಾಗಿ ಬೆಳೆದ ಮಾಳವಿಕಾ ಅವರು ತಮ್ಮ ಬಾಲ್ಯದ ಜೀವನ ಬಹಳ ಸುಖಕರವಾಗಿತ್ತು ಎಂದಿದ್ದಾರೆ. ಅವರ ತಂದೆ ಬಹಳ ಟ್ರಾನ್ಸ್ಫರ್ ಗಳನ್ನು ಎದುರಿಸಿದ್ದರು ಆದ ಕಾರಣ ಕೇವಲ ವಾರದ ಅಂತ್ಯದಲ್ಲಿ ಮಾತ್ರ ಅವರ ಮನೆಗೆ ಬಂದು ಮಗಳನ್ನುನೋಡಿಕೊಂಡು ಹೋಗುತ್ತಿದ್ದರು. ಇನ್ನುಳಿದಂತೆ ಅಮ್ಮ ಹಾಗೂ ಸಹೋದರಿಯ ಜೊತೆಯಲ್ಲಿ ತಮ್ಮ ಬಾಲ್ಯದ ಜೀವನವನ್ನು ಮಾಳವಿಕಾ ಅವರು ಕಳೆದಿದ್ದರು.

ಬಾಲ್ಯದಿಂದಲೇ ತಮ್ಮ ಕಾಲೋನಿಯ ಮಕ್ಕಳ ಗ್ಯಾಂಗಿಗೆ ಇವರೇ ನಾಯಕಿ ಎಂದರೆ ನಂಬಲೇಬೇಕು, ಎಲ್ಲಾ ಆಟಗಳಲ್ಲಿಯೂ ಮುಂಚೂಣಿಯಲ್ಲಿ ನಿಲ್ಲುತ್ತದ್ದ ಮಾಳವಿಕಾ ರವರು ಮಕ್ಕಳ ಗ್ಯಾಂಗಿಗೆ ನಾಯಕಿಯಾಗಿದ್ದರು. ಆದರೆ ದುರದೃಷ್ಟವಶಾತ್ ಕೇವಲ ಒಂದು ಬಾಂಬ್ ಇವರ ಜೀವನಕ್ಕೆ ಹೊಸ ತಿರುವು ನೀಡಿತ್ತು. ಮಾಳವಿಕಾ ರವರು ನೋಡನೋಡುತ್ತಿದ್ದಂತೆ ಎರಡು ಕೈಗಳನ್ನು ಕಳೆದುಕೊಂಡಿದ್ದರು. ಆದರೆ ಇದರಿಂದ ಅವರು ಧೃತಿಗೆಡಲಿಲ್ಲ ಬದಲಾಗಿ ತಮ್ಮ ಹೋರಾಟವನ್ನು ಮತ್ತಷ್ಟು ಹುಮ್ಮಸ್ಸಿನಿಂದ ಮತ್ತೆ ಆರಂಭಿಸಿದ್ದರು.

ಒಂದು ವರ್ಷ ಶಾಲೆಗೆ ತೆರಳಲು ಸಾಧ್ಯವಾಗದೇ ಇದ್ದ ಕಾರಣ ಹತ್ತನೇ ತರಗತಿಯನ್ನು ಮನೆಯಲ್ಲಿ ಕೂತು ಓದಿಕೊಂಡು ಬರೋಬ್ಬರಿ 483/500 ಅಂಕಗಳನ್ನು ಗಳಿಸಿದ್ದರು. ಇದೆಲ್ಲವನ್ನು ಗಮನಿಸಿದ ರಾಷ್ಟ್ರಪತಿ ರವರು ಮಾಳವಿಕಾ ರವರನ್ನು ಕರೆದು ಸನ್ಮಾನ ಮಾಡಿದರು. ಇದಾದ ನಂತರ ತಿರುಗಿಯೂ ನೋಡದ ಮಾಳವಿಕಾ ರವರು ತಮ್ಮ ಜೀವನದಲ್ಲಿ ಪಿಎಚ್ಡಿ  ಮುಗಿಸಿ,ಯಾವುದೇ ಕೆಲಸಕ್ಕೆ ಹೋಗದೆ ತಮ್ಮ ಇಡೀ ಜೀವನವನ್ನು ಇಂದೂ ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದಾರೆ.

ಕೆಲವರು ಇವರ ಬಗ್ಗೆ ಕರುಣೆಯನ್ನು ತೋರಿಸಿದ್ದಾರೆ ಇನ್ನು ಕೆಲವರು ಎರಡು ಕೈಗಳು ಇಲ್ಲದ ಬಾಲಕಿ ಎಂದು ಕಿಚಾಯಿಸಿದ್ದಾರೆ. ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಕೈಗಳಿಲ್ಲದ ಇವರನ್ನು ಯಾರು ಮದುವೆಯಾಗುತ್ತಾರೆ ಯಾರು ನೋಡಿಕೊಳ್ಳುತ್ತಾರೆ ಎಂದೆಲ್ಲ ಟೀಕೆ ಮಾಡಿದ್ದಾರೆ ಆದರೆ ಇಂದು ಮಾಳವಿಕಾ ಅವರು ತಮ್ಮ ಸಮಾಜ ಸೇವೆ ಗಳಿಂದಲೇ ಹೆಸರಾಗಿದ್ದಾರೆ.

ಮೋಟಿವೇಷನಲ್ ಸ್ಪೀಕರ್ ಆಗಿರುವ ಮಾಳವಿಕಾ ರವರು ಹಲವಾರು ಸೇವಾ ಸಂಸ್ಥೆಗಳ ನೆರವಿನಿಂದ ಕಾಲೇಜುಗಳಲ್ಲಿ, ಶಾಲೆಗಳಲ್ಲಿ ಹಾಗೂ ವಿವಿಧ ಸಭೆ ಸಮಾರಂಭಗಳಲ್ಲಿ ಜನರಿಗೆ ಹುಮ್ಮಸ್ಸು ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಅದರಿಂದ ಬರುವ ಹಣವನ್ನು ಸಂಪೂರ್ಣವಾಗಿ ಸಮಾಜ ಸೇವೆಗೆ ಬಳಸುತ್ತಿರುವ ಇವರಿಗೆ ನೀವು ಹ್ಯಾಟ್ಸಾಫ್ ಹೇಳಲೇಬೇಕು.