ಈ ಅಂತರಾಷ್ಟ್ರೀಯ ಸುಂದರಿ ಮೊದಲು ಹೇಗಿದ್ದರೂ ಗೊತ್ತಾ?? ಇವರ ಕಥೆ ಕೇಳಿದರೆ ನಿಮ್ಮ ಮನಸ್ಸಿನಲ್ಲಿ ಹೊಸ ಹುಮ್ಮಸ್ಸು ಮೂಡುತ್ತದೆ.

ಈ ಅಂತರಾಷ್ಟ್ರೀಯ ಸುಂದರಿ ಮೊದಲು ಹೇಗಿದ್ದರೂ ಗೊತ್ತಾ?? ಇವರ ಕಥೆ ಕೇಳಿದರೆ ನಿಮ್ಮ ಮನಸ್ಸಿನಲ್ಲಿ ಹೊಸ ಹುಮ್ಮಸ್ಸು ಮೂಡುತ್ತದೆ.

ಛಲವಿದ್ದರೆ ಮಾರ್ಗ ಎಂಬ ಗಾದೆಯನ್ನು ನಮ್ಮ ಹಿರಿಯರು ಬಹುಶಹ ಇಂತಹ ಇಚ್ಛಾಶಕ್ತಿ ಯುಳ್ಳ ಜನರನ್ನು ನೋಡಿ ಹೇಳಿರಬೇಕು ಎಂಬುದು ನಮ್ಮ ಅಭಿಪ್ರಾಯ ವಾಗಿದೆ. ಕೆಲವೇ ಕೆಲವು ತಿಂಗಳುಗಳ ಹಿಂದೆ ಈ ಅಂತರಾಷ್ಟ್ರೀಯ ಸುಂದರಿ ಹೇಗಿದ್ದರೂ ಮತ್ತು ಅವರ ಕಥೆಯನ್ನು ತಿಳಿಯಲು ಸಂಪೂರ್ಣ ಓದಿ.

ಜೋನ್ನ ಜೋಸೆಫ್ ರವರು ತಮ್ಮ ಪೋಷಕರ ಮುದ್ದು ಮಗಳಾಗಿ ಬೆಳೆದಿದ್ದರು. ಹುಟ್ಟಿನಿಂದಲೇ ದೇಹ ಬಹಳ ತೂಕವನ್ನು ಹೊಂದಿದ್ದರು, ಇದರಿಂದ ಸಾಮಾಜಿಕವಾಗಿ ಬಾರಿ ಟೀಕೆಗಳಿಗೆ ಗುರಿಯಾಗಿದ್ದರು, ಸ್ನೇಹಿತರು ಹಾಗೂ ತಮ್ಮ ಕುಟುಂಬದವರು ಸದಾ ಕಿಚಾಯಿಸುತ್ತಾ ಕಾಲ ಕಳೆಯುತ್ತಿದ್ದರು. ಆದರೆ ಈ ಎಲ್ಲಾ ಟೀಕೆಗಳಿಗೆ ಜೋನ್ನ ಜೋಸೆಫ್ ರವರು ಸರಿಯಾದ ಉತ್ತರವನ್ನು ನೀಡಿದ್ದಾರೆ.

ತನ್ನ ಅತಿಯಾದ ತೂಕದಿಂದಾಗಿ ನಿರಂತರವಾಗಿ ಟೀಕೆಗಳಿಗೆ ಗುರಿಯಾದಾಗ ಜೋನ್ನ ಜೋಸೆಫ್ ರವರು ಖಿನ್ನತೆಗೆ ಒಳಗಾಗುತ್ತಾರೆ. ಕೇವಲ ಏಳು ವರ್ಷ ಆಗುವಷ್ಟರಲ್ಲಿ ಬರೋಬ್ಬರಿ 60 ಕೆಜಿ ತೂಕ ಇರುತ್ತಾರೆ. ಇದಕ್ಕೆಲ್ಲಾ ಕಾರಣ ತಮ್ಮ ಆಹಾರ ಪದ್ಧತಿ ಎಂದು ತಿಳಿದಿದ್ದರೂ ಸಹ ತಮ್ಮ ಇಷ್ಟದ ತಿಂಡಿಗಳನ್ನು ಬಿಡಲು ಮನಸ್ಸಿರಲಿಲ್ಲ. ಅದೇ ಕಾರಣಕ್ಕಾಗಿತಮಗೆ ಇಷ್ಟವಾದ ರೀತಿಯಲ್ಲಿ ಆಹಾರವನ್ನು ತೆಗೆದುಕೊಳ್ಳಲು ಮುಂದುವರಿಸಿದಾಗ ಅವರಿಗೆ 16 ವರ್ಷ ಕಳೆಯುವಷ್ಟರಲ್ಲಿ ಬರೋಬ್ಬರಿ 100 ಕೆಜಿ ತೂಕವನ್ನು ಹೊಂದಿರುತ್ತಾರೆ.

ಇದರಿಂದ ಮತ್ತಷ್ಟು ಟೀಕೆಗಳಿಗೆ ಗುರಿಯಾಗುತ್ತಾರೆ . ಸಾಮಾನ್ಯವಾಗಿ ಇದು ಅವರ ಖಿನ್ನತೆಗೆ ಕಾರಣವಾಗುತ್ತದೆ ತದನಂತರ ಹೇಗಾದರೂ ಮಾಡಿ ತೂಕ ಇಳಿಸಿಕೊಳ್ಳಬೇಕು ಎಂಬ ಕಾರಣದಿಂದ ಅವಶ್ಯಕತೆ ಇರುವಷ್ಟು ಮಾತ್ರ ಆಹಾರವನ್ನು ಸೇವಿಸಿ ವ್ಯಾಯಾಮ ಶಾಲೆಯ ಮೊರೆ ಹೋಗುತ್ತಾರೆ. ಆದರೆ ಯಾವ ಯಾವ ವ್ಯಾಯಾಮ ಶಾಲೆಯು ಇವರ ಉಪಯೋಗಕ್ಕೆ ಬರುವುದಿಲ್ಲ ಬದಲಾಗಿ ಇನ್ನಷ್ಟು ದಪ್ಪ ಆಗುತ್ತಾರೆ.

ಇದರಿಂದ ಧೃತಿಗೆಡದ ಜೋನ್ನ ಜೋಸೆಫ್ ರವರು ವ್ಯಾಯಾಮ ಶಾಲೆ ಯಲ್ಲಿ ತಾವು ವ್ಯಾಯಾಮ ಮಾಡುತ್ತಿರುವಾಗ ಜನರು ನಗುತ್ತಾರೆ ಎಂದು ವ್ಯಾಯಾಮ ಶಾಲೆಯನ್ನು ತ್ಯಜಿಸಿ ಅವರ ಮನೆಯ ಸಮೀಪದಲ್ಲಿ ಇರುವ ಜಾಗದಲ್ಲಿ ರಾತ್ರಿ ಹೊತ್ತು ಯಾರಿಗೂ ಕಾಣದ ಹಾಗೆ ಎರಡು ಗಂಟೆಗಳ ಕಾಲ ಓಡುತ್ತಾರೆ. ಇದರಿಂದ ಸಾಮಾನ್ಯವಾಗಿ ಅವರು ಬಹಳ ಬೇಗ ತೂಕವನ್ನು ಕಳೆದುಕೊಳ್ಳುತ್ತಾರೆ.

ಇನ್ನೇನು ಟೀಕೆಗಳು ನಿಲ್ಲುತ್ತವೆ ಎಂದು ಕೊಂಡರೆ, ಟೀಕೆಗಳು ಮತ್ತಷ್ಟು ಹೆಚ್ಚಾಗುತ್ತವೆ ಯಾಕೆಂದರೆ ದಿಢೀರ್ ತೂಕ ಇಳಿಸಲು ಇವರು ಮಾದಕ ಪದಾರ್ಥಗಳನ್ನು ಬಳಸಿದ್ದಾರೆ ಎಂಬ ಆರೋಪ ಇವರ ಮೇಲೆ ಕೇಳಿ ಬರುತ್ತದೆ. ಇದರಿಂದ ಮತ್ತಷ್ಟು ಖಿನ್ನತೆಗೆ ಒಳಗಾಗುವ ಜೋನ್ನ ಜೋಸೆಫ್ ರವರು ಅದೊಂದು ದಿನ ಕೇವಲ ನಾನು ತೂಕ ಕಳೆದುಕೊಳ್ಳುವುದಷ್ಟೇ ಗುರಿಯಾಗಿ ಇರಬಾರದು ಎಂದು ಯೋಚಿಸಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ತಯಾರು ಮಾಡಲು ನಿರ್ಧರಿಸುತ್ತಾರೆ. ಕ್ರಮೇಣ ಅವರು ತೂಕ ಕಳೆದು ಕೊಳ್ಳುತ್ತಾ ಸಾಗುತ್ತಾರೆ ಮತ್ತು ಧೈರ್ಯದಿಂದ ಜಗತ್ತನ್ನು ಎದುರಿಸಲು ಬೇಕಾಗಿರುವ ಎಲ್ಲಾ ಸಕಾರಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ.

ತದನಂತರ ಇನ್ನೇನು ಉಳಿದಿದೆ ಆತ್ಮಸ್ಥೈರ್ಯ ಒಂದು ಇದ್ದರೆ ಸಾಕು ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಜೋನ್ನ ಜೋಸೆಫ್ ಅವರು ಉದಾಹರಣೆಯಾಗಿ ನಿಲ್ಲುತ್ತಾರೆ ಅಂದರೆ ತಮ್ಮ ಸಂಪೂರ್ಣ ತೂಕವನ್ನು ಕಳೆದುಕೊಂಡು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವಷ್ಟು ಸುಂದರಿಯಂತೆ ಹೊಳೆಯುತ್ತಿರುತ್ತಾರೆ ತದನಂತರ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಶ್ವಕ್ಕೆ ಎರಡನೇ ಸ್ಥಾನ ಪಡೆದು ತನ್ನನ್ನು ಟೀಕೆ ಮಾಡಿದ ಎಲ್ಲರಿಗೂ ಸರಿಯಾದ ಉತ್ತರವನ್ನು ನೀಡಿ ಮತ್ತಷ್ಟು ಜನರಿಗೆ ಮಾರ್ಗದರ್ಶಕರಾಗುತ್ತಾರೆ.

ನೋಡಿದಿರಲ್ಲ, ಆತ್ಮಸ್ಥೈರ್ಯದಿಂದ ಏನೆಲ್ಲಾ ಸಾಧಿಸಬಹುದು ಎಂಬುದು ನಿಮಗೆ ಈಗ ಅರ್ಥವಾಗಿರಬೇಕು. ಜೋನ್ನ ಜೋಸೆಫ್ ರವರು ಸಾಧಿಸಿದ್ದಾರೆ ಎಂದರೆ ಖಂಡಿತವಾಗಲೂ ನೀವು ಸಹ ಸಾಧಿಸುತ್ತೀರಿ ಎಂದರ್ಥ, ಮುನ್ನುಗ್ಗಿ ಯಾವ ಸಮಯದಲ್ಲಿಯೂ ಸಹ ಅಂಜಬೇಡಿ ನಿಮ್ಮ ಗುರಿ ನಿಮ್ಮ ಕಣ್ಣ ಮುಂದೆ ಇರಲಿ ಖಂಡಿತ ಗೆಲುವು ನಿಮ್ಮದೇ ಆಗಿರುತ್ತದೆ.