ಬೃಹತ್ ಘೋಷಣೆ: ಕನ್ನಡಿಗರ ಕನಸು ನನಸು ಮಾಡಲು ಸಿದ್ದರಾದ ಮೋದಿ

ಕನ್ನಡಿಗರು ಹಲವಾರು ವರ್ಷಗಳಿಂದ ಬಹು ದೊಡ್ಡ ಕನಸನ್ನು ಕಾಣುತ್ತಿದ್ದಾರೆ. ಹಲವಾರು ವರ್ಷಗಳಿಂದಲೂ ಈ ಕನಸು ನನಸು ಮಾಡುವಂತಹ ನಾಯಕ ಭಾರತದಲ್ಲಿ ಕಂಡು ಬಂದಿರಲಿಲ್ಲ ಆದರೆ ಇಂದು ನರೇಂದ್ರ ಮೋದಿ ಅವರು ಇಡೀ ಕರ್ನಾಟಕದ ಜನತೆಯ ಕೂಗನ್ನು ಕೇಳಿಸಿಕೊಂಡು ಕೊನೆಗೂ ಕನಸನ್ನು ನನಸು ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂಬ ವಿಷಯ ಮೂಲಗಳಿಂದ ತಿಳಿದುಬಂದಿದೆ.

ಹಲವಾರು ವರ್ಷಗಳಿಂದಲೂ ಯಾವುದೇ ಅಪೇಕ್ಷೆ ಇಲ್ಲದೆ ನಮ್ಮೆಲ್ಲರ ನೆಚ್ಚಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ರವರು ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ತಮ್ಮ ಮೂಲ ಅಂಶಗಳಾದ ಆಹಾರ, ಅಕ್ಷರ ಹಾಗೂ ಜ್ಞಾನ ಎಂಬ ತ್ರಿವಿಧ ದಾಸೋಹಿ ಕಾರ್ಯಕ್ರಮದಲ್ಲಿ ಶತಮಾನದ ಪುರುಷರು ಎನಿಸಿಕೊಂಡಿದ್ದ ಕ್ರಾಂತಿಕಾರಿ ಬಸವಣ್ಣ ರವರ ಕಾಯಕವೇ ಕೈಲಾಸ ಮತ್ತು ನಿತ್ಯ ದಾಸೋಹ ತತ್ವದ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಗಳ ಸಾಧನೆಯು ಕರ್ನಾಟಕದ ಪ್ರತಿಯೊಬ್ಬರಿಗೂ ತಿಳಿದಿದೆ.

ಕಳೆದ ಮಾರ್ಚ್ 3, 1930 ರಿಂದ ಮಠದ ಜವಾಬ್ದಾರಿಯನ್ನು ಹೊತ್ತು ನಿರಂತರವಾಗಿ ಯಾವುದೇ ಧರ್ಮಕ್ಕೆ ಸೀಮಿತವಾಗದೆ, ಜಾತಿಯನ್ನು ಪರಿಗಣಿಸದೆ ಕೇವಲ ಸಮಾಜದ ಏಳಿಗೆಗಾಗಿ ಶ್ರೀಗಳು ಶ್ರಮಿಸುತ್ತಿದ್ದಾರೆ. ಈಗಾಗಲೇ ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುವ ಶ್ರೀಗಳು ಭಾರತದ ಎಷ್ಟೋ ಯುವಕರಿಗೆ ದಾರಿ ದೀಪವಾಗಿದ್ದಾರೆ ಹಾಗೂ ಇನ್ನೂ ಹಲವು ಯುವಕರನ್ನು ದೇಶದ ಶಕ್ತಿಯಾಗಿ ತಮ್ಮ ಶಾಲೆಗಳಲ್ಲಿಯೇ ತಯಾರು ಮಾಡುತ್ತಿದ್ದಾರೆ.

ಇನ್ನು ಬಡವಿದ್ಯಾರ್ಥಿಗಳಿಗೆ ದೇವರ ರೂಪದಲ್ಲಿ ಕಾಣಸಿಗುವ ಶ್ರೀಗಳನ್ನು ಎಷ್ಟು ಹೊಗಳಿದರೂ ಸಾಲದು. ಪ್ರಾರ್ಥಮಿಕ ಶಾಲೆ ಯಿಂದ ಹಿಡಿದು ಇಂಜಿನಿಯರಿಂಗ್ ಕಾಲೇಜಿನ ವರೆಗೆ ಎಲ್ಲಾ ಡಿಗ್ರಿ ಕಾಲೇಜು ಗಳನ್ನು ಸಹ ಶ್ರೀಗಳು ನಡೆಸುತ್ತಿದ್ದಾರೆ. ಸಂಸ್ಕೃತ ಪಾಠ ಶಾಲೆ ಯಿಂದ ಆರಂಭವಾದ ಇವರ ಶಿಕ್ಷಣ ಸಂಸ್ಥೆ  ನಿರಂತರವಾಗಿ ಮುಂದುವರೆಯುತ್ತದೆ. ಇಂದು ಸಿದ್ದಗಂಗಾ ಶಿಕ್ಷಣ ಸಂಸ್ಥೆಯು ಮಹಾವೃಕ್ಷವಾಗಿ ಬೆಳೆದು ನಿಂತಿದೆ.

ಇಷ್ಟೆಲ್ಲಾ ಸಮಾಜ ಸೇವೆ ಮಾಡಿದರು ಶ್ರೀಗಳಿಗೆ ಭಾರತರತ್ನ ಸಿಕ್ಕಿಲ್ಲವೆಂದು ಕರ್ನಾಟಕದ ಜನರು ಹಲವಾರು ದಿನಗಳಿಂದ ಕನಸು ಕಾಣುತ್ತಿದ್ದರು ಹಾಗೂ ಸರ್ಕಾರಗಳಿಗೆ ಇನ್ನಿಲ್ಲದ ಒತ್ತಾಯಗಳನ್ನು ಮಾಡುತ್ತಿದ್ದರು. ಯಾವುದೇ ಸಾಧನೆ ಮಾಡಿಲ್ಲ ದ ನಾಯಕರಿಗೆ ಭಾರತ ರತ್ನ ನೀಡುತ್ತಾ ತದನಂತರ ಇನ್ನು ಕೆಲವರು ತಮಗೆ ತಾವೇ ಭಾರತ ರತ್ನ ಕೊಟ್ಟಿಕೊಂಡು ಕಾಲ ಕಳೆಯುತ್ತಿದ್ದ ಕಾಲವದು.

ಆದರೆ ಇಂದು ನರೇಂದ್ರ ಮೋದಿ ರವರ ಸರ್ಕಾರ ಸಿದ್ದಗಂಗಾ ಶ್ರೀ ರವರಿಗೆ ಭಾರತ ರತ್ನ ನೀಡಲಿದೆ ಎಂಬ ಕೂಗು ಕೇಳಿಬಂದಿದೆ. ಉನ್ನತ ಮೂಲಕ ಮೂಲಗಳಿಂದ ತಿಳಿದು ಬಂದಿರುವ ಈ ವಿಷಯ ಬಿಡಿ ಕರ್ನಾಟಕದ ಜನರಲ್ಲಿ ಹೊಸ ಹುಮ್ಮಸ್ಸನ್ನು ಉಂಟುಮಾಡಿದೆ ಹಾಗೂ ನರೇಂದ್ರ ಮೋದಿ ರವರ ಈ ಕಾರ್ಯಕ್ಕೆ ಜನರು ಉಘೇ ಉಘೇ ಎನ್ನುತ್ತಿದ್ದಾರೆ.