ರಣರಂಗವಾದ ರಾಮನಗರ: ಕುಟುಂಬ ಮತ್ತು ಜಾತಿ ರಾಜಕಾರಣ ಅಂತ್ಯ

ರಣರಂಗವಾದ ರಾಮನಗರ: ಕುಟುಂಬ ಮತ್ತು ಜಾತಿ ರಾಜಕಾರಣ ಅಂತ್ಯ

0

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಜ್ಯದಲ್ಲಿ ಈಗ ಉಪ ಲೋಕಸಭಾ ಚುನಾವಣೆಯ ಕಾವು ಏರತೊಡಗಿದೆ. ಒಂದು ಕಡೆ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಪೋಷಿಸುತ್ತಿದ್ದಾರೆ ಇನ್ನೊಂದು ಕಡೆ ಪಕ್ಷದಲ್ಲಿ ಬಂಡಾಯಗಳು ಹುಟ್ಟಿಕೊಳ್ಳುತ್ತಿವೆ. ಆದರೆ ಸಾಮಾನ್ಯವಾಗಿ ಜೆಡಿಎಸ್ ಪಕ್ಷದಲ್ಲಿ ಬಂಡಾಯಗಳು ಕಡಿಮೆ.

[do_widget id=et_ads-2]

ಯಾಕೆಂದರೆ ಜೆಡಿಎಸ್ ಪಕ್ಷದಲ್ಲಿ ಹಲವರ ನಿಂದನೆಯ ಪ್ರಕಾರ ಕುಟುಂಬ ರಾಜಕಾರಣ ಮತ್ತು ಜಾತಿ ರಾಜಕಾರಣ ಹೆಚ್ಚು. ಈ ಆರೋಪವನ್ನು ಹೊತ್ತುಕೊಂಡಿರುವ ಜೆಡಿಎಸ್ ಪಕ್ಷವು ಮತ್ತೊಮ್ಮೆ ತಮ್ಮ ಕುಟುಂಬದ ಅಭ್ಯರ್ಥಿಯನ್ನು ರಾಮನಗರದಿಂದ ಕಣಕ್ಕಿಳಿಸಲು ನಿರ್ಧರಿಸಿದರು ಆದರೆ ಕೆಲವು ರಾಮನಗರದಲ್ಲಿ ನಡೆದ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಸ್ವತಃ ದೇವೇಗೌಡ ರವರೇ ಪ್ರಶ್ನಾತ್ಮಕ ವಾಗಿ ಉತ್ತರಿಸುತ್ತಿದ್ದಾರೆ. ಅಷ್ಟಕ್ಕೂ ನಡೆಯುತ್ತಿರುವುದು ಏನು ಗೊತ್ತಾ?

[do_widget id=et_ads-3]

ಜೆಡಿಎಸ್ ಪಕ್ಷದ ವರಿಷ್ಠರ ಸಭೆಯಲ್ಲಿ ರಾಮನಗರದಿಂದ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದರ ವಿರುದ್ಧ ಜೆಡಿಎಸ್ ಪಕ್ಷದಲ್ಲಿ ಅಪಸ್ವರ ಎದ್ದಿದ್ದು ಕೇವಲ ದೇವೇಗೌಡ ಕುಟುಂಬದವರೆ ಸ್ಪರ್ಧಿಸುತ್ತಿದ್ದಾರೆ ರಾಮನಗರ ಜೆಡಿಎಸ್ ನಲ್ಲಿ ಅನಿತಾ ಕುಮಾರಸ್ವಾಮಿ ಅವರಿಗಿಂತಲೂ ಹೆಚ್ಚಿನ ಪ್ರಭಾವಿ ನಾಯಕರು ಇದ್ದಾರೆ ಮತ್ತು ಅರ್ಹತೆಯುಳ್ಳವರು ಇದ್ದಾರೆ.

[do_widget id=et_ads-4]

ಅಂತವರಿಗೆ ಅವಕಾಶ ನೀಡದೆ ಮತ್ತೊಮ್ಮೆ ಅನಿತಾ ಕುಮಾರಸ್ವಾಮಿ ಅವರಿಗೆ ಮಣೆ ಹಾಕುವುದು ತಪ್ಪು ಒಂದು ವೇಳೆ ಇದೇ ನಡೆದಲ್ಲಿ ಹಲವು ಜೆಡಿಎಸ್ ಬೆಂಬಲಿಗರು ಪಕ್ಷ ತೊರೆದು ಬೇರೆ ಪಕ್ಷಕ್ಕೆ ಹೋಗುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

[do_widget id=et_ads-5]

ಈ ಘಟನೆಗಳನ್ನು ಗಮನಿಸಿದ ಸ್ವತಹ ದೇವೇಗೌಡರು ಒಂದು ಕ್ಷಣ ಶಾಕ್ ಆಗಿದ್ದು ತಮ್ಮ ಪಕ್ಷದ ಅಭ್ಯರ್ಥಿಯನ್ನು ಬಹಿರಂಗವಾಗಿ ಘೋಷಿಸಿಲ್ಲ. ಸಾಮಾನ್ಯವಾಗಿ ರಾಮನಗರದಲ್ಲಿ ದೇವೇಗೌಡರ ನಿರ್ಧಾರದ ವಿರುದ್ಧ ಯಾರು ಇಲ್ಲಿಯವರೆಗೂ ಅಪಸ್ವರವನ್ನು ಎತ್ತಿರಲಿಲ್ಲ ಆದರೆ ದೇವೇಗೌಡರ ನಿರ್ಧಾರವನ್ನು ಜೆಡಿಎಸ್ ಬೆಂಬಲಿಗರು ತಿರಸ್ಕರಿಸಿರುವುದು ದೇವೇಗೌಡರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

[do_widget id=et_ads-6]

ಸಾಮಾನ್ಯವಾಗಿ ಜೆಡಿಎಸ್ ಕಾರ್ಯಕರ್ತರು ತಮ್ಮ ವರಿಷ್ಠರನ್ನು ಮತ್ತು ಜಾತಿಯನ್ನು ನೋಡಿಕೊಂಡು ಪಕ್ಷಕ್ಕೆ ಬೆಂಬಲವನ್ನು ಘೋಷಿಸುತ್ತಿದ್ದರು ಆದರೆ ಈ ಘಟನೆಗಳನ್ನು ನೋಡುತ್ತಿದ್ದರೆ ರಾಮನಗರದಲ್ಲಿ ಕುಟುಂಬ ರಾಜಕಾರಣ ಮತ್ತು ಜಾತಿ ರಾಜಕಾರಣ ಅಂತ್ಯವಾಗಲಿದೆ ಎಂಬುದು ರಾಜಕೀಯ ಪಂಡಿತರ ವಾದವಾಗಿದೆ.

[do_widget id=et_ads-7]