ಬಯಲಾಯಿತು ಬೃಹತ್ ಸಮೀಕ್ಷೆ: ಮೋದಿ ಅಲೆ ಇದೆ ಎಂದು ಕೊಂಡಿದ್ದವರಿಗೆ ಆಶ್ಚರ್ಯ

ಬಯಲಾಯಿತು ಬೃಹತ್ ಸಮೀಕ್ಷೆ: ಮೋದಿ ಅಲೆ ಇದೆ ಎಂದು ಕೊಂಡಿದ್ದವರಿಗೆ ಆಶ್ಚರ್ಯ

2

ಹೌದು, ಬೃಹತ್ ಸಮೀಕ್ಷೆ ಬಯಲಾಗಿದೆ. ಮೋದಿ ಅಲೆ ಭಾರತದಲ್ಲಿ  ಅಬ್ಬರಿಸುತ್ತದೆ ಎಂದು ಕೊಂಡವಗಿರಿಗೆ ಶಾಕ್ ಆಗಿದೆ. ಮೋದಿ ಅಭಿಮಾನಿಗಳು ಸಂತೋಷ ಪಡುವಂತಹ ವಿಷಯವಲ್ಲ ಇದು, ಹೆಮ್ಮೆ ಪಡುವಂತಹ ವಿಷಯ. ಭಾರತದಲ್ಲಿ ಮೋದಿ ಅಲೆ, ಕೇವಲ ಅಲೆಯಾಗಿ ಉಳಿದಿಲ್ಲ, ಬದಲಾಗಿ ಸುನಾಮಿಯಾಗಿ ಪರಿವರ್ತನೆಗೊಂಡು ವಿರೋಧ ಪಕ್ಷಗಳನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಲು ಸಿದ್ಧವಾಗಿ ಕುಳಿತಿದೆ ಎಂಬುದು ಈ ಸಮೀಕ್ಷೆಯಿಂದ ತಿಳಿದು ಬಂದಿದೆ.

ಭಾರತದ ಪ್ರತಿಷ್ಠಿತ ಸಂಸ್ಥೆಯಾದ ಟೈಮ್ಸ್ ನೌ ನ್ಯೂಸ್ ಎಂಬ ಸುದ್ದಿ ವಾಹಿನಿ ಇಂಡಿಯನ್ ಡೆವಲಪ್ಮೆಂಟ್ ಡಿಬೇಟ್ ಎಂಬ ಕಾರ್ಯಕ್ರಮದ ಅಡಿಯಲ್ಲಿ ಈ ಟಿ  ಮೆಗಾ ಸಿಇಒ ಸಮೀಕ್ಷೆಯೊಂದನ್ನು ನಡೆಸಿತ್ತು.  ಬರೋಬ್ಬರಿ ಮೂರು ವಿವಿಧ ಸಮೀಕ್ಷೆಗಳನ್ನು ನಡೆಸಿದ ಸಮೀಕ್ಷೆಗಳ ಫಲಿತಾಂಶ ಹೊರಬಿದ್ದಿದ್ದು ದೇಶದೆಲ್ಲೆಡೆ ಯಾರೂ ಊಹಿಸದ ರೀತಿಯಲ್ಲಿ ಫಲಿತಾಂಶವೊಂದು ಹೊರಬಿದ್ದಿದೆ. ಆ ಮೂರು ವಿವಿಧ ವಿಚಾರಗಳಲ್ಲಿ ನಡೆಸಿದ ಸಮೀಕ್ಷೆಯ ಫಲಿತಾಂಶಗಳ  ವಿವರಗಳಿಗಾಗಿ ಕೆಳಗಡೆ ಓದಿ.

ವಿಚಾರ 1 ಮತ್ತು ಅದರ ಫಲಿತಾಂಶ: 

ಈ ವಿಚಾರದ ಅಡಿಯಲ್ಲಿ ಭಾರತದಲ್ಲಿ ಯಾವ ಪಕ್ಷವು ಅಧಿಕಾರಕ್ಕೆ ಬಂದಲ್ಲಿ 2019 ರ ನಂತರ ಭಾರತಕ್ಕೆ ಉಪಯೋಗವಾಗಲಿದೆ ಎಂದು ಜನರ ಅಭಿಪ್ರಾಯವನ್ನು ಸಂಗ್ರಹಿಸತೊಡಗಿದರು.

ಫಲಿತಾಂಶ: ಬರೋಬ್ಬರಿ ಶೇಕಡಾ 86.1 ರಷ್ಟು ಜನ ಭಾರತಕ್ಕೆ ಮೋದಿ ಸರ್ಕಾರವೇ ಒಳಿತು ಎಂದು ಮತ ನೀಡಿದ್ದಾರೆ. ಉಳಿದ 4 .2 ರಷ್ಟು ಜನ ಕಾಂಗ್ರೆಸ್ ಪರ ಮತ ನೀಡಿದ್ದರೆ,ಉಳಿದ ಮತಗಳನ್ನು ವಿವಿಧ ಪಕ್ಷಗಳು ಹಂಚಿಕೊಂಡಿವೆ.

ವಿಚಾರ 2 ಮತ್ತು ಅದರ ಫಲಿತಾಂಶ: 

ಭಾರತದ ಆರ್ಥಿಕತೆಯಲ್ಲಿ ಮೋದಿ ಸರ್ಕಾರದ ಸಾಧನೆಗೆ ಹೇಗೆ ದರ ನೀಡುತ್ತೀರಿ ಎಂದು ಪ್ರಶ್ನಿಸಿದ್ದ ಸಮೀಕ್ಷೆಗೆ ಜನರ ಉತ್ತರ ಹೀಗಿದೆ.

ಫಲಿತಾಂಶ: ಶೇಕಡಾ 50 ರಷ್ಟು ಜನರು ಮೋದಿ ಸರ್ಕಾರದ ಸಾಧನೆಗೆ ಉತ್ತಮ ಎಂಬ ಅಂಕ ನೀಡಿದ್ದರೆ,  ಉಳಿದ 23.6 % ಜನ ಅತ್ಯುತ್ತಮ ಎಂದು ಅಂಕ ನೀಡಿದ್ದಾರೆ. ಸಾಧಾರಣ ಎಂದು 25 ಪರ್ಸೆಂಟ್ ಜನ  ಉತ್ತರಿಸಿದ್ದರೆ  ಕೇವಲ 1.4 ರಷ್ಟು ಜನ ಮಾತ್ರ ಮೋದಿ ಸರ್ಕಾರದ ಸಾಧನೆಯನ್ನು ಮೆಚ್ಚಿ ಕೊಂಡಿಲ್ಲ.

ವಿಚಾರ 3 ಮತ್ತು ಅದರ ಫಲಿತಾಂಶ: 

ಇನ್ನು ಮೂರನೇ ವಿಚಾರದಲ್ಲಿ ಜಿಎಸ್ಟಿ ತೆರಿಗೆ ವಿಧಾನವನ್ನು ಪ್ರಶ್ನಿಸಿರುವ ಈ ಮಾಧ್ಯಮಕ್ಕೆ ಜನರ ಪ್ರತಿಕ್ರಿಯೆ ಹೀಗಿದೆ ನೋಡಿ.

ಫಲಿತಾಂಶ:  ಶೇಕಡ 56.9 % ರಷ್ಟು ಜನ ಉತ್ತಮ ಎಂದು ಮೋದಿ ಸರ್ಕಾರದ ಆಡಳಿತಕ್ಕೆ ಅಂಕ ನೀಡಿದರೆ,  ನಮಗೆ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಶೇಕಡ 19.4 % ರಷ್ಟು ಜನ ಉತ್ತರಿಸಿದ್ದಾರೆ. ಜಿ ಎಸ್ ಟಿ ತೆರಿಗೆ ವಿಧಾನದಿಂದ ತಮ್ಮ ವ್ಯಾಪಾರ ವಹಿವಾಟುಗಳ ಮೇಲೆ ಅತ್ಯುತ್ತಮ ಬೆಳವಣಿಗೆಯಾಗಿದೆ ಎಂದು 12.5 ರಷ್ಟು ಜನ ಉತ್ತರಿಸಿದ್ದಾರೆ. ಇನ್ನು ಉಳಿದಂತೆ ಏನು ಹೇಳಲು ಸಾಧ್ಯವಿಲ್ಲ ಎಂದು 2.8 ರಷ್ಟು ಜನ ಉತ್ತರಿಸಿದರೆ  ಕೇವಲ 8.4ರಷ್ಟು ಜನ  ಜಿ ಎಸ್ ಟಿ ತೆರಿಗೆ ವಿಧಾನವನ್ನು ವಿರೋಧಿಸಿದ್ದಾರೆ.

ಈ ಸಮೀಕ್ಷೆಯನ್ನು ನೋಡಿದರೆ ಮೋದಿ ಸರ್ಕಾರವು ಕಾಂಗ್ರೆಸ್ ಮುಕ್ತ ಭಾರತ ಮಾಡುವುದಲ್ಲ ಬದಲಾಗಿ ಇಡಿ ದೇಶವನ್ನೇ ವಿರೋಧ ಪಕ್ಷ ಮುಕ್ತ ವನ್ನಾಗಿ ಮಾಡಲು ಪಣ ತೊಟ್ಟು ನಿಂತಂತೆ ಕಾಣುತ್ತಿದೆ. ಈ ಮಾತು ಸತ್ಯ ಎನಿಸಿದರೆ ಶೇರ್ ಮಾಡಿ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Source: TimesNowPoll