ರಾಜಕೀಯದಾಟ ಶುರು! ತೆಲಂಗಾಣ ಮುಖ್ಯಮಂತ್ರಿ ಪ್ರಧಾನಮಂತ್ರಿ ಮೋದಿಯವರನ್ನು ಭೇಟಿ ಆದದ್ದು ಏಕೆ?

0

ಕೇಂದ್ರದಲ್ಲಿ ಬಿಜೆಪಿಯ ಎನ್ ಡಿ ಎ ತೊರೆದ ತೆಲುಗು ದೇಶಂ ಪಕ್ಷದ ಹಾಗೂ ಆಂದ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಒಂದು ಹೆಜ್ಜೆ ಮುಂದಿಟ್ಟು ಅವಿಶ್ವಾಸ ನಿರ್ಣಯವನ್ನು ಕೈಗೊಂಡರು. ಟಿಡಿಪಿ ಬಿಜೆಪಿಯಿಂದ ದೂರವಾಗುತ್ತಿದ್ದಂತೆ ಅತ್ತ ತೆಲಂಗಾಣದಿಂದ ಇನ್ನೊಂದು ಸುದ್ದಿ ಬಿಜೆಪಿಗೆ ಶುಭ ಸುದ್ದಿಯಾಗುತ್ತಿದೆ. ಮಮತಾ ಬ್ಯಾನರ್ಜಿಯ ಫೆಡರಲ್ ಫ್ರಂಟ್ ಹಾಗೂ ಮಹಾಘಡಬಂದನ್ ಗೆ ಸೆಡ್ಡು ಹೊಡೆಯಲು ತೆಲಂಗಾಣದ ಈ ನೇತಾರ ತಯಾರಾಗಿರುವಂತೆ ಕಾಣಿಸುತ್ತಿದೆ.

ಪ್ರಧಾನಮಂತ್ರಿ ಮೋದಿಯವರನ್ನು ಭೇಟಿಯಾದ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್

ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಒಂದೇ ತಿಂಗಳಲ್ಲಿ ಎರಡು ಬಾರಿ ಭೇಟಿಯಾಗಿದ್ದಾರೆ. ತೆಲಂಗಾಣ ರಾಷ್ಟ್ರೀಯ ಸಮಿತಿ ಬಿಜೆಪಿಗೆ ಬಹಳ‌ ಹತ್ತಿರವಾಗುವಂತೆ ಎದುರಿಗೆ ಬಾಸವಾಗುತ್ತಿದೆ. ಕೆಲ ಮಾಧ್ಯಮಗಳ ವರದಿ ಪ್ರಕಾರ ಮುಂಬತುವ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ತೆಲಂಗಾಣ ರಾಷ್ಟ್ರೀಯ ಸಮಿತಿ ಸದ್ಯ ಲೋಕಸಭೆಯಲ್ಲಿ ಹನ್ನೊಂದು ಸ್ಥಾನಗಳನ್ನು ಹೊಂದಿದ್ದು ಬಿಜೆಪಿ ಸೇರಿದರೆ ಬಹುದೊಡ್ಡ ಶಕ್ತಿ ಸಿಕ್ಕಿದಂತಾಗುತ್ತದೆ.

ತೆಲಂಗಾಣ ರಾಷ್ಟ್ರೀಯ ಸಮಿತಿ ಸದಸ್ಯರ ಬಳಿ ಪ್ರಧಾನಮಂತ್ರಿ ಭೇಟಿ ಬಗ್ಗೆ ಕೇಳಿದಾಗ ಇದೊಂದು ರಾಜ್ಯದ ಅಭಿವೃದ್ಧಿ ವಿಚಾರವಾಗಿ ನಡೆದ ಮಾತುಕತೆ ರಾಜ್ಯಕ್ಕೆ ಪ್ರತ್ಯೇಕ ಹೈಕೋರ್ಟ್ ಹಾಗೂ ಸೆಕ್ರೆಟರಿ ಕಛೇರಿ ಬೇಕೆಂಬ ಬಗ್ಗೆ ಬೇಡಿಕೆ ಇಡಲು ಬೇಟಿ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ಅವಿಶ್ವಾಸ ನಿರ್ಣಯ ಸಂಧರ್ಭದಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ ಬಿಜೆಪಿ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡಿರಲಿಲ್ಲ ಹಾಗೂ ಒಂದು ತಿಂಗಳಲ್ಲಿ ಎರಡು ಬಾರಿ ಪ್ರಧಾನಮಂತ್ರಿ ಬೇಟಿ ರಾಜಕೀಯ ಸಂಚಲನ ಮೂಡಿಸಿದೆ.

ಏನೇ ಆಗಲಿ ಮೋದಿ ಜೊತೆ ಅಭಿವೃದ್ಧಿ ಮಂತ್ರ ಹಿಡಿದು ದೇಶ ಮುನ್ನಡೆಸಲು ಬರುವ ಪ್ರತಿಯೊಬ್ಬರಿಗೂ ಸ್ವಾಗತ