ಹೀಗೆ ಮಾಡದಿದ್ದರೆ ಬಂದ್ ಆಗಲಿವೆ ನಿಮ್ಮ ಎಟಿಎಂ ಕಾರ್ಡ್

0

ಹೌದು ಶೀಘ್ರದಲ್ಲಿಯೇ ನಿಮ್ಮ ಬಳಿ ಇರುವ ಏಟಿಎಂ ಕಾರ್ಡ್ ಕೆಲಸವನ್ನು ನಿಲ್ಲಿಸಲಿದೆ. ಆರ್ ಬಿ ಐ ಬ್ಯಾಂಕಿನ ಆದೇಶದ ಮೇರೆಗೆ ಈ ನಿಯಮವನ್ನು ಪ್ರತಿಯೊಂದು ಬ್ಯಾಂಕ್ ಜಾರಿಗೆ ತರಲಾಗುತ್ತಿದೆ. ಅಷ್ಟಕ್ಕೂ ವಿಷಯವಾದರೂ ಏನು? ಈಗಿನ ಏಟಿಎಂ ಕಾರ್ಡ್ ಗಳು ಮ್ಯಾಗ್ನೆಟಿಕ್ ಸ್ಟ್ರೈಪ್ ಅನ್ನು ಒಳಗೊಂಡಿವೆ.

ಆದರೆ ಹೊಸ ಆರ್ ಬಿ ಐ ಬ್ಯಾಂಕಿನ ನೀತಿಯ ಪ್ರಕಾರ ಪ್ರತಿಯೊಂದು ಬ್ಯಾಂಕುಗಳು ಮ್ಯಾಗ್ನೆಟಿಕ್ ಸ್ಟ್ರೈಪ್ ಹೊಂದಿರುವ ಕಾರ್ಡುಗಳನ್ನು ನಿಷೇಧ ಗೊಳಿಸಿ ದೇಶಾದ್ಯಂತ ಚಿಪ್ ಕಾರ್ಡ್ ಅನ್ನು ಜಾರಿಗೆ ತರಬೇಕೆಂದು ಆದೇಶಿಸಿದೆ.

ಕಾರಣವಾದರೂ ಏನು?

ಗ್ರಾಹಕರ ಮಾಹಿತಿಯನ್ನು ಸುರಕ್ಷಿತವಾಗಿಡಲು ಆರ್ ಬಿ ಐ ಈ ಸೂತ್ರವನ್ನು ಅನುಸರಿಸಲು ನಿರ್ಧರಿಸಿದೆ. ಡಿಸೆಂಬರ್ 2018 ರ ನಂತರ ಈ ಹೊಸ ನೀತಿ ಜಾರಿಗೆ ಬರಲಿದ್ದು ಗ್ರಾಹಕರು ಬ್ಯಾಂಕ್ ಗಳಲ್ಲಿ ತಮ್ಮ ಹೊಸ ಕಾರ್ಡ್ ಗಳನ್ನು ಪಡೆಯಬಹುದಾಗಿದೆ.